ಹಿಮಯುಗ
 	ಭೂ ಚರಿತ್ರೆಯಲ್ಲಿ ನೆಲಭಾಗದ ವಿಶಾಲ ವಲಯಗಳು ಬರ್ಫ ಹಾಳೆಗಳಿಂದ ಆಚ್ಛಾದಿತವಾಗಿದ್ದ ಅವಧಿ(ಐಸ್‍ಏಜ್). ಒಂದು ಹಿಮಯುಗದ ನಂತರ ಮತ್ತೊಂದು ಹಿಮಯುಗ ಸಂಭವಿಸುವ ಮಧ್ಯೆಯ ಹಿಮರಹಿತ ಕಾಲ ಅಂತರ ಹಿಮಾನಿಯುಗ(ಇಂಟರ್ ಗ್ಲೇಷಿಯಲ್ ಪೀರಿಯಡ್).

	ಹಿಮಯುಗದ ಅವಧಿ ಒಂದು ಲಕ್ಷ ವರ್ಷಗಳವರೆಗೂ ಇರುವುದುಂಟು. ಆಚ್ಛಾದಿತವಾದ ಬರ್ಫವಯ ಕರಗಿ ಅದೃಶ್ಯವಾಗಲು ಪ್ರಾರಂಭಗೊಂಡಡಾಗ ಆ ಹಿಮಯುಗದ ಅಂತ್ಯ ಪ್ರಾರಂಭವಾದಂತೆ. ಎರಡು ಹಿಮಯುಗಗಳ ನಡುವಿನ ಅಂತರವು ಸುಮಾರು ಹತ್ತರಿಂದ ಇಪ್ಪತ್ತು ಸಾವಿರ ವರ್ಷಗಳಾಗಿರುತ್ತದೆ. ಹಿಮಯುಗಗಳ ಅಧ್ಯಯನದ ಪ್ರಕಾರ ಈಗಿನ ಯುಗವು ಒಂದು ಅಂತರ ಹಿಮಾನಿಯುಗವಾಗಿದೆ. ಸುಮಾರು 11500 ವರ್ಷಗಳ ಹಿಂದೆ ಒಂದು ಹಿಮಯುಗ ಮುಗಿದಿದ್ದು, ಮತ್ತೊಂದು ಹಿಮಯುಗದ ಪ್ರಾರಂಭವಾಗಲಿದೆ ಎಂಬುದು ಭೂವಿಜ್ಞಾನಿಗಳ ಅಭಿಪ್ರಾಯ.

	ಭೂ ಇತಿಹಾಸದಲ್ಲಿ ಹಲವಾರು ಹಿಮಯುಗಗಳು ಗತಿಸಿದ್ದು, ಪ್ರತಿಯೊಂದರ ಅವಧಿ ಸುಮಾರು 20-50 ಮಿಲಿಯನ್ ವರ್ಷಗಳಾಗಿತ್ತು ಎನ್ನಲಾಗಿದೆ. ಮೊಟ್ಟಮೊದಲ ಹಿಮಯುಗ 2-3 ಮಿಲಿಯನ್ ವರ್ಷಗಳ ಹಿಂದೆ ಸಂಭವಿಸಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಅವರ ಪ್ರಕಾರ 900ರಿಂದ 600 ಮಿಲಿಯನ್ ವರ್ಷಗಳ ಹಿಂದೆ ಮೂರು ಹಿಮಯುಗಗಳು, 400 ರಿಂದ 300 ಮಿಲಿಯನ್ ವರ್ಷಗಳ ಹಿಂದೆ ಎರಡು ಹಿಮಯುಗಗಳು ಸಂಭವಿಸಿವೆ.

	ಹಿಮಾನಿ (ಗ್ಲೇಸಿಯನ್)ಗಳು ಸಂಚಯನ ಮಾಡಿರುವ ಅವಶೇಷಗಳಿಂದ ಹಾಗೂ ರೂಪಿಸಿರುವ ಚಹರೆಗಳಿಂದ (ಉದಾಹರಣೆ ಗೀಟುಗಳು(ಸ್ಟ್ರಯೇಷನ್ಸ್) ಭೂಭಾಗವು  ಬರ್ಫದಿಂದ ಆಚ್ಛಾದಿತವಾಗಿದ್ದನ್ನು ಊಹಿಸಬಹುದು. ರ್ಕಾನಿಫರಸ್ ಯುಗದಲ್ಲಾದ ಅಂತಹ ಲಕ್ಷಣಗಳು ಆಫ್ರಿಕಾ, ದಕ್ಷಿಣ ಅಮೆರಿಕಾ, ಭಾರತ ಹಾಗೂ ಆಸ್ಟ್ರೇಲಿಯಗಳಲ್ಲಿ ಕಂಡುಬಂದಿವೆ.

	ಯುರೋಪ್ ಖಂಡದಲ್ಲಿ ನಾಲ್ಕು ಹಿಮಯುಗಗಳು ಸಂಭವಿಸಿವೆ. ಅವುಗಳಲ್ಲಿ ಗುನ್ಜ್, ಮಿಂತಲ್, ರಿeóï, ಮತ್ತು ಊರ್ನ್ ಎಂದು ಕರೆಯಲಾಗಿದೆ. ಉತ್ತರ ಅಮೆರಿಕದಲ್ಲಿ ಕಂಡುಬಂದಿರುವ ಮುರುಕಲು ಗುಪ್ಪೆ(ಮೊರೇನ್)ಗಳು, ನೆಬ್ರಾಸ್ಕಾವ್, ಕಾನ್‍ಸಾನ್, ಇಲಿನೋಯಿನ್ ಮತ್ತು ವಿಸ್ಕಾನ್‍ಸಿನ್ ಹಿಮಯುಗಗಳಲ್ಲಿ ರೂಪುಗೊಂಡದ್ದಾಗಿವೆ. ಆಲ್ಪ್ಸ್ ಕಣಿವೆಗಳಲ್ಲಿ ಕಂಡುಬಂದಿರುವ ಬೃಹತ್ತಾದ ತೂಗುಕಣಿವೆ ಮತ್ತು - ಆಕಾರದ ಕಣಿವೆಗಳು ಹಿಮಯುಗದ ರೂಪುಗೊಂಡದೆ ಎಂದು ಭೂವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

	ಉತ್ತರ ಅಮೆರಿಕದಲ್ಲಿ ಒಂಟೆ ಮತ್ತು ಕುದುರೆ, ಆನೆ, ಕಾಡಮ್ಮೆ, ಜಿಂಕೆ ಮತ್ತು ಕರಡಿಯ ಪಳೆಯುಳಿಕೆಗಳು ಪ್ಲೀಸ್ಟೋಸೀನ್ ಹಿಮಯುಗದಲ್ಲಿ ಕಂಡುಬಂದಿವೆ. ಬರ್ಫವು ಹರಡಿಕೊಳ್ಳುತ್ತಾ ಬಂದಂತೆ ಕುದುರೆ ಮತ್ತು ಒಂಟೆ ಏಷ್ಯ ಖಂಡಕ್ಕೆ ವಲಸೆ ಹೋದವು ಎನ್ನಲಾಗಿದೆ.										
	(ಎ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ